ಉಚಿತ ಹೊಲಿಗೆ ಯಂತ್ರ 2025: ದೇವರಾಜ ಅರಸು ನಿಗಮದ ಯೋಜನೆಗೆ ಅರ್ಜಿ ಹಾಕಿ – ಅಂತಿಮ ದಿನಾಂಕ ಜೂನ್ 30!

By Kannadathi

Published on:

ರಾಜ್ಯ ಸರ್ಕಾರದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ ವತಿಯಿಂದ 2025ನೇ ಸಾಲಿಗೆ ಹಿಂದುಳಿದ ವರ್ಗದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ (Free Sewing Machine) ವಿತರಿಸಲಾಗುತ್ತಿದೆ. ಈ ಯೋಜನೆಯು ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದ್ದು, ಜೂನ್ 30, 2025 ಕೊನೆಯ ದಿನಾಂಕ.


ಯಾರು ಅರ್ಜಿ ಹಾಕಬಹುದು?

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು
  • ಹಿಂದುಳಿದ ವರ್ಗದ ಪ್ರವರ್ಗ 1, 2A, 3A, 3B ಅಭ್ಯರ್ಥಿಗಳು ಅರ್ಹ
  • 18 ರಿಂದ 55 ವರ್ಷದೊಳಗಿನ ಮಹಿಳೆಯರು
  • ಗ್ರಾಮೀಣ ಪ್ರದೇಶ: ವಾರ್ಷಿಕ ಆದಾಯ ₹98,000 ಕ್ಕಿಂತ ಕಡಿಮೆ
  • ನಗರ ಪ್ರದೇಶ: ವಾರ್ಷಿಕ ಆದಾಯ ₹1.2 ಲಕ್ಷ ಕ್ಕಿಂತ ಕಡಿಮೆ
  • ಅರ್ಜಿದಾರರು ಪೂರ್ವದಲ್ಲಿ ಈ ಯೋಜನೆಯ ಲಾಭ ಪಡೆದಿರಬಾರದು
  • ಹೊಲಿಗೆ ತರಬೇತಿ ಪಡೆದಿರುವ ಪ್ರಮಾಣಪತ್ರ ಹೊಂದಿರಬೇಕು

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

  1. ಆಧಾರ್ ಕಾರ್ಡ್ ಪ್ರತಿ
  2. ಬ್ಯಾಂಕ್ ಪಾಸ್ಬುಕ್ (ಆಧಾರ್ ಜೋಡಣೆ ಇರುವ ಖಾತೆ)
  3. ರೇಷನ್ ಕಾರ್ಡ್
  4. ಪಾಸ್‌ಪೋರ್ಟ್ ಗಾತ್ರದ ಫೋಟೋ
  5. ಹೊಲಿಗೆ ತರಬೇತಿ ಪ್ರಮಾಣಪತ್ರ
  6. ಜಾತಿ ಮತ್ತು ಆದಾಯ ಪ್ರಮಾಣಪತ್ರ
  7. ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸುವ ವಿಧಾನ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ:

  1. Seva Sindhu Portal ಗೆ ಲಾಗಿನ್ ಆಗಿ
  2. “Free Sewing Machine” ಆಯ್ಕೆ ಮಾಡಿ
  3. ಐಡಿ/OTP ಮೂಲಕ ಲಾಗಿನ್ ಮಾಡಿ
  4. ಅರ್ಜಿ ವಿವರಗಳನ್ನು ಭರ್ತಿ ಮಾಡಿ
  5. ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ
  6. ಕೊನೆಗೆ “Submit” ಬಟನ್ ಕ್ಲಿಕ್ ಮಾಡಿ

ಅಥವಾ, ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ / CSC ಕೇಂದ್ರ ಮೂಲಕ ಸಹ ಅರ್ಜಿ ಸಲ್ಲಿಸಬಹುದು.


ವಿಶೇಷ ಸೂಚನೆಗಳು

  • ಪೂರ್ವದಲ್ಲಿ ಯಾವುದೇ ಯೋಜನೆಯ ಲಾಭ ಪಡೆದವರು ಮತ್ತೆ ಅರ್ಜಿ ಹಾಕಲು ಅರ್ಹರಲ್ಲ
  • 2023-24 ಅಥವಾ 2024-25ರಲ್ಲಿ ಅರ್ಜಿ ಹಾಕಿದವರು ಈ ವರ್ಷ ಮತ್ತೆ ಅರ್ಜಿ ಸಲ್ಲಿಸಬೇಕಿಲ್ಲ
  • ಅರ್ಜಿಯಲ್ಲಿನ ಹೆಸರು ಮತ್ತು ದಾಖಲೆಗಳಲ್ಲಿನ ಹೆಸರು (ಶ್ರೀ/ಶ್ರೀಮತಿ/ಕುಮಾರಿ) ಹೊಂದಾಣಿಕೆಯಾಗಬೇಕು

ಉದ್ಯೋಗವಿಲ್ಲದ ಮಹಿಳೆಯರಿಗೆ ಇದು ಸುವರ್ಣಾವಕಾಶ! ಇಂತಹ ಅನೇಕ ಉಚಿತ ಸರ್ಕಾರಿ ಯೋಜನೆಗಳ ಮಾಹಿತಿ ತಕ್ಷಣ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈಗಲೇ ಜಾಯಿನ್ ಆಗಿ.


Kannadathi

ನಮ್ಮ ವೆಬ್‌ಸೈಟ್‌ನಲ್ಲಿ ನೀವು ಟ್ರೆಂಡಿಂಗ್ ಸುದ್ದಿ ಮತ್ತು ಹೊಸ ವಾಹನಗಳ ಅಪ್ಡೇಟ್‌ಗಳನ್ನು ತ್ವರಿತವಾಗಿ ಪಡೆಯಬಹುದು. ನಿಖರ ಮಾಹಿತಿ ಮತ್ತು ಆಳವಾದ ವಿಶ್ಲೇಷಣೆಯೊಂದಿಗೆ ಆಟೋಮೊಬೈಲ್ ಜಗತ್ತಿನ ಹೊಸ ತಂತ್ರಜ್ಞಾನಗಳನ್ನು ತಿಳಿಯಿರಿ!

38 thoughts on “ಉಚಿತ ಹೊಲಿಗೆ ಯಂತ್ರ 2025: ದೇವರಾಜ ಅರಸು ನಿಗಮದ ಯೋಜನೆಗೆ ಅರ್ಜಿ ಹಾಕಿ – ಅಂತಿಮ ದಿನಾಂಕ ಜೂನ್ 30!”

Leave a Comment